ಬರ್ಮಿಂಗ್ಹ್ಯಾಮ್ನ 4 ಮಸೀದಿಗಳ ಮೇಲೆ ದಾಳಿ
ಲಂಡನ್, ಮಾ. 21: ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ ಪಟ್ಟಣದ ನಾಲ್ಕು ಮಸೀದಿಗಳ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಲಾಗಿದೆ. ದೊಡ್ಡ ಸುತ್ತಿಗೆಯೊಂದನ್ನು ಹೊಂದಿದ್ದ ವ್ಯಕ್ತಿಯೊಬ್ಬ ಎರಡು ಮಸೀದಿಗಳ ಕಿಟಕಿಗಳನ್ನು ಒಡೆಯುವುದು ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು.
ಬರ್ಮಿಂಗ್ಹ್ಯಾಮ್ ನಗರದ ಉತ್ತರದ ಭಾಗದಲ್ಲಿರುವ ನಾಲ್ಕು ಬೇರೆ ಬೇರೆ ಸ್ಥಳಗಳಲ್ಲಿರುವ ಮಸೀದಿಗಳ ಮೇಲೆ ನಡೆದ ದಾಳಿಗಳ ಬಗ್ಗೆ ಭಯೋತ್ಪಾದನೆ ನಿಗ್ರಹ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
Next Story