ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಭಾರತೀಯನಿಗೆ ಜೀವಾವಧಿ
ನ್ಯೂಯಾರ್ಕ್, ಎ.13: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಕ್ಕಾಗಿ 41 ವರ್ಷದಭಾರತ ಮೂಲದ ವ್ಯಕ್ತಿಯೊಬ್ಬನಿಗೆ ಅಮೆರಿಕದ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ ಹಾಗೂಮಕ್ಕಳ ನೀಲಿಚಿತ್ರವನ್ನು ನಿರ್ಮಿಸಿರುವುದಕ್ಕಾಗಿ 30 ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆ ನೀಡಿದೆ.
ಕ್ಯಾಲಿಫೋರ್ನಿಯ ನಿವಾಸಿ ದೀಪಕ್ ದೇಶಪಾಂಡೆಗೆ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಕಾರ್ಲೋಸ್ಮೆಂಡೋನ್ಸ ಗುರುವಾರ ಶಿಕ್ಷೆ ವಿಧಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಅವನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು.
Next Story