ಜೆರುಸಲೇಮ್ನ ಅಲ್-ಅಕ್ಸಾ ಮಸೀದಿಯಲ್ಲಿ ಬೆಂಕಿ
ಜೆರುಸಲೇಮ್, ಎ. 16: ಫ್ರಾನ್ಸ್ ರಾಜಧಾನಿ ಪ್ಯಾರಿಸ್ನ ‘ನೋಟ್ರ ಡಾಮ್’ ಕತೀಡ್ರಲ್ನಲ್ಲಿ ಸೋಮವಾರ ಬೆಂಕಿ ಹೊತ್ತಿದ ಸಮಯದಲ್ಲೇ ಜೆರುಸಲೇಮ್ನಲ್ಲಿರುವ ಅಲ್-ಅಕ್ಸಾ ಮಸೀದಿ ಆವರಣದಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ ಎಂದು ‘ನ್ಯೂಸ್ವೀಕ್’ ವರದಿ ಮಾಡಿದೆ.
ಮರ್ವಾನಿ ಪ್ರಾರ್ಥನಾ ಕೋಣೆಯ ಮೇಲ್ಛಾವಣಿಯ ಹೊರಗಿನ ಕಾವಲುಗಾರನ ಕೋಣೆಯ ಹೊರಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಫೆಲೆಸ್ತೀನ್ ರಾಷ್ಟ್ರೀಯ ಪ್ರಾಧಿಕಾರದ ಅಧಿಕೃತ ಸುದ್ದಿ ಸಂಸ್ಥೆ ಫೆಲೆಸ್ತೀನ್ ನ್ಯೂಸ್ ಏಜನ್ಸಿ ತಿಳಿಸಿದೆ.
ಬೆಂಕಿಯನ್ನು ಇಸ್ಲಾಮಿಕ್ ವಕ್ಫ್ನ ಅಗ್ನಿಶಾಮಕ ಘಟಕ ನಂದಿಸಿದೆ ಎಂದು ‘ರಶ್ಯ ಟುಡೆ’ ವರದಿ ಮಾಡಿದೆ.
ಮರ್ವಾನಿ ಪ್ರಾರ್ಥನಾ ಕೋಣೆಯ ಮೇಲಿನಿಂದ ಹೊಗೆ ಏಳುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾದ ವೀಡಿಯೊ ತುಣುಕುಗಳು ತೋರಿಸಿವೆ.
ಬೆಂಕಿಗೆ ಕಾರಣ ಗೊತ್ತಾಗಿಲ್ಲ. ಈ ಸ್ಥಳದಲ್ಲಿ ಮಕ್ಕಳು ಆಡುತ್ತಿದ್ದು, ಅವರು ಬೆಂಕಿ ಹೊತ್ತಿಸಿರಬಹುದು ಎಂಬುದಾಗಿ ಭಾವಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Next Story