ಶ್ರೀಲಂಕಾದಲ್ಲಿ ಇನ್ನೊಂದು ಬಾಂಬ್ ಸ್ಫೋಟ
ಕೊಲಂಬೊ, ಎ.25: ಸರಣಿ ಬಾಂಬ್ ಸ್ಫೋಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಗುರುವಾರ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದ್ದು, ಸಾವು ನೋವಿನ ಬಗ್ಗೆ ಮಾಹಿತಿ ತಕ್ಷಣ ಗೊತ್ತಾಗಿಲ್ಲ.
ಲಂಕಾದ ರಾಜಧಾನಿ ಕೊಲಂಬೊದಿಂದ 40 ಕಿ.ಮೀ ದೂರದಲ್ಲಿರುವ ಪುಗೊಡಾ ಪಟ್ಟಣದ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಶ್ರೀಲಂಕಾದಲ್ಲಿ ಕಳೆದ ರವಿವಾರ ನಡೆದ ಭೀಕರ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 359ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಇದರೊಂದಿಗೆ ಲಂಕಾದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ.
Next Story