ಸಿಖ್ ಯುವಕನಿಗೆ ನ್ಯೂಯಾರ್ಕ್ ರೆಸ್ಟೋರೆಂಟ್ಗೆ ಪ್ರವೇಶ ನಿಷೇಧ
ನ್ಯೂಯಾರ್ಕ್, ಮೇ 17: 23 ವರ್ಷದ ಪೇಟಧಾರಿ ಸಿಖ್ ವ್ಯಕ್ತಿಯೊಬ್ಬರಿಗೆ ಇಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಪ್ರವೇಶ ನಿರಾಕರಿಸಿದ ಘಟನೆ ವರದಿಯಾಗಿದೆ. ಮಧ್ಯರಾತ್ರಿಯ ಬಳಿಕ ಸ್ನೇಹಿತರನ್ನು ಭೇಟಿಯಾಗಲು ಹೋಗಿದ್ದಾಗ ಗುರ್ವಿಂದರ್ ಗ್ರೆವಾಲ್ಗೆ ಈ ಅನುಭವವಾಗಿದೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.
‘‘ನನಗೆ ಆಘಾತವಾಗಿದೆ, ಮುಜುಗರಕ್ಕೊಳಗಾಗಿದ್ದೇನೆ ಹಾಗೂ ನೋವಾಗಿದೆ. ನನಗೆ ಇಂಥ ಅನುಭವ ಯಾವತ್ತೂ ಆಗಿಲ್ಲ. ಪೇಟ ಧರಿಸಿಕೊಂಡು ಹೋಗಿದ್ದಾಗ ಯಾವುದೇ ಸಂಸ್ಥೆಯವರು ಈ ರೀತಿ ನಡೆದುಕೊಂಡಿಲ್ಲ’’ ಎಂದು ಸ್ಟೋನಿ ಬ್ರೂಕ್ ವಿಶ್ವವಿದ್ಯಾನಿಲಯದ ಪದವೀಧರರಾಗಿರುವ ಗ್ರೆವಾಲ್ ಹೇಳಿದರು.
ಶುಕ್ರವಾರ ಮತ್ತು ಶನಿವಾರಗಳಂದು ರಾತ್ರಿ 10 ಗಂಟೆಯ ಬಳಿಕ ಯಾವುದೇ ರೀತಿಯ ತಲೆ ವಸ್ತ್ರಗಳನ್ನು ಧರಿಸಿ ಒಳಗೆ ಹೋಗುವುದನ್ನು ನಿಷೇಧಿಸುವ ನೂತನ ನೀತಿ ಜಾರಿಗೆ ಬಂದಿದ್ದಾಗಿ ರೆಸ್ಟೋರೆಂಟ್ನ ಮ್ಯಾನೇಜರ್ ಹೇಳಿರುವುದಾಗಿ ಅವರು ನುಡಿದರು.
Next Story