ಚೀನಾದಂತೆ ಭಾರತಕ್ಕೂ ಆದ್ಯತೆ ನೀಡಬೇಕು: ಲಂಡನ್ ಮೇಯರ್
ಲಂಡನ್, ಮೇ 19: ಲಂಡನ್ನಲ್ಲಿ ಭಾರತದ ವಿದೇಶಿ ನೇರ ಹೂಡಿಕೆ (ಎಫ್ಡಿಐ)ಯನ್ನು ಉತ್ತೇಜಿಸಲು, ಚೀನಾಕ್ಕೆ ನೀಡುವಂತೆ ಭಾರತೀಯ ಕಂಪೆನಿಗಳು ಮತ್ತು ವಿದ್ಯಾರ್ಥಿಗಳಿಗೂ ಆದ್ಯತಾ ನೀತಿಯನ್ನು ಅನ್ವಯಿಸಬೇಕು ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಕರೆ ನೀಡಿದ್ದಾರೆ.
‘ಲಂಡನ್ ಎಲ್ಲರಿಗೂ ತೆರೆದಿದೆ’ ಎಂಬ ತನ್ನ ಸಂದೇಶವನ್ನು ಪುನರುಚ್ಚರಿಸಿದ ಮೇಯರ್, ಬ್ರಿಟನ್ ಸರಕಾರದ ಪ್ರತಿಕೂಲ ವಲಸೆ ನೀತಿಗಳನ್ನು ಖಂಡಿಸಿದರು. ಭಾರತದಿಂದ ಲಂಡನ್ಗೆ ಬರುವ ಹೆಚ್ಚಿನ ಹೂಡಿಕೆಗಳು ಮತ್ತು ವಿದ್ಯಾರ್ಥಿಗಳಿಗೆ ಈ ನೀತಿಗಳು ತಡೆಯಾಗಿವೆ ಎಂದು ಅವರು ಬಣ್ಣಸಿದರು.
Next Story