ಅಸಾಂಜ್ ಬಂಧನಕ್ಕೆ ಬ್ರಿಟನ್ಗೆ ಸ್ವೀಡನ್ ಮನವಿ
ಕೋಪನ್ಹೇಗನ್, ಮೇ 20: ಬ್ರಿಟನ್ನಲ್ಲಿ ಜೈಲಿನಲ್ಲಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ವಿರುದ್ಧ ಬಂಧನಾದೇಶ ಹೊರಡಿಸುವಂತೆ ಮನವಿ ಮಾಡಿದ್ದೇನೆ ಎಂದು ಸ್ವೀಡನ್ನ ಪ್ರಾಸಿಕ್ಯೂಟರ್ ಒಬ್ಬರು ಹೇಳಿದ್ದಾರೆ.
‘‘ಅತ್ಯಾಚಾರ ಪ್ರಕರಣದಲ್ಲಿ ಅಸಾಂಜ್ರನ್ನು ಬಂಧಿಸಲು ಸ್ವೀಡನ್ನ ಸಂಬಂಧಪಟ್ಟ ನ್ಯಾಯಾಲಯವು ನಿರ್ಧರಿಸಿದರೆ, ನಾನು ಯುರೋಪಿಯನ್ ಬಂಧನ ವಾರಂಟ್ ಹೊರಡಿಸುತ್ತೇನೆ’’ ಎಂದು ಪ್ರಾಸಿಕ್ಯೂಟರ್ ಎವಾ-ಮಾರೀ ಪರ್ಸನ್ ಹೇಳಿದರು.
2012ರಿಂದ ಲಂಡನ್ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದ ಅಸಾಂಜ್ಗೆ ರಾಯಭಾರ ಕಚೇರಿಯು ಆಶ್ರಯ ನಿರಾಕರಿಸಿದ ಬಳಿಕ, ಎಪ್ರಿಲ್ 11ರಂದು ಬ್ರಿಟಿಶ್ ಪೊಲೀಸರು ಅವರನ್ನು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.
ಅಸಾಂಜ್ ವಿರುದ್ಧ ಜಾಮೀನು ಶರತ್ತುಗಳನ್ನು ಉಲ್ಲಂಘಿಸಿದ ಆರೋಪವಿತ್ತು. ಈ ಪ್ರಕರಣದಲ್ಲಿ ಈಗ ಅವರು ಲಂಡನ್ ಜೈಲಿನಲ್ಲಿ 50 ವಾರಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಅದೂ ಅಲ್ಲದೆ, ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ನ ಕಂಪ್ಯೂಟರ್ಗೆ ಕನ್ನ ಹಾಕಿದ ಪ್ರಕರಣದಲ್ಲಿ ಅಮೆರಿಕಕ್ಕೆ ಗಡಿಪಾರನ್ನೂ ಅವರು ಎದುರಿಸುತ್ತಿದ್ದಾರೆ.