ಚೀನಾದಲ್ಲಿ ಭೂಕಂಪ: ಕನಿಷ್ಠ 12 ಮಂದಿ ಸಾವು, 134 ಜನರಿಗೆ ಗಾಯ
ಬೀಜಿಂಗ್, ಜೂ.18: ನೈಋತ್ಯ ಚೀನಾದಲ್ಲಿ ಸಂಭವಿಸಿದ ಪ್ರಬಲ(6.0)ಭೂಕಂಪಕ್ಕೆ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, 134 ಜನರಿಗೆ ಗಾಯವಾಗಿದೆ. ಕಟ್ಟಡದ ಅವಶೇಷಗಳಿಂದ ಮೃತದೇಹಗಳನ್ನು ಹೊರ ತೆಗೆಯುವ, ಗಾಯಗೊಂಡವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಸಿಯಾಚಿನ್ ಪ್ರಾಂತ್ಯದ ಯಿಬಿನ್ನಲ್ಲಿ ಸೋಮವಾರ ರಾತ್ರಿ ಸಂಭವಿಸಿದ 6.0 ರಷ್ಟು ತೀವ್ರತೆಯ ಭೂಕಂಪನದ ಬಳಿಕ 4,000ಕ್ಕೂ ಅಧಿಕ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಡಜನ್ಗಟ್ಟಲೆ ಕಟ್ಟಡಗಳು ಹಾನಿಗೊಂಡಿವೆ ಅಥವಾ ಧ್ವಂಸವಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಹಲವು ಹೆದ್ದಾರಿಗಳು ಹಾಗೂ ಯಿಬಿನ್ ಹಾಗೂ ಕ್ಸುಯ್ ಕೌಂಟಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಭೂಕಂಪದಿಂದ ಬಿರುಕುಬಿಟ್ಟಿವೆ ನ್ಯೂಸ್ ಏಜೆನ್ಸಿಯೊಂದು ವರದಿ ಮಾಡಿದೆ.
Next Story