ಪ್ರತಿಭಟನಕಾರ್ತಿಯ ಮೇಲೆ ಹಲ್ಲೆ: ಬ್ರಿಟನ್ ಸಚಿವ ಅಮಾನತು
ಲಂಡನ್, ಜೂ. 21: ಲಂಡನ್ನಲ್ಲಿ ಗುರುವಾರ ನಡೆದ ಸಮಾರಂಭವೊಂದರ ಸ್ಥಳಕ್ಕೆ ಬಂದ ‘ಗ್ರೀನ್ಪೀಸ್ ಯುನೈಟೆಡ್ ಕಿಂಗ್ಡಮ್’ನ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬ್ರಿಟನ್ನ ಏಶ್ಯ ಮತ್ತು ಪೆಸಿಫಿಕ್ ಖಾತೆಯ ಸಚಿವ ಮಾರ್ಕ್ ಪೀಲ್ಡ್ರನ್ನು ಪ್ರಧಾನಿ ತೆರೇಸಾ ಮೇ ಶುಕ್ರವಾರ ಅಮಾನತುಗೊಳಿಸಿದ್ದಾರೆ.
ಸಮಾರಂಭದಲ್ಲಿ ಅತಿಥಿಯೊಬ್ಬರು ಭಾಷಣ ಮಾಡುತ್ತಿದ್ದಾಗ ಪರಿಸರ ಹೋರಾಟಗಾರರು ಸ್ಥಳಕ್ಕೆ ಬಂದು ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಂದರ್ಭದಲ್ಲಿ ಒಬ್ಬ ಮಹಿಳಾ ಕಾರ್ಯಕರ್ತೆ ಒಳಗೆ ನುಗ್ಗಿದಾಗ ಸಚಿವರು ಆಕೆಯ ಕುತ್ತಿಗೆಗೆ ಕೈಹಾಕಿ ಹೊರಗೆ ದೂಡಿಕೊಂಡು ಹೋಗಿರುವುದು ದಾಖಲಾಗಿದೆ.
Next Story