ಇಮ್ರಾನ್ ಖಾನ್ ಬಳಿ 11 ಕೋಟಿ ರೂ., 4 ಆಡು
ಇಸ್ಲಾಮಾಬಾದ್, ಜು. 3: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 10.8 ಕೋಟಿ ರೂಪಾಯಿ ಮೌಲ್ಯದ್ಯ ಸಂಪತ್ತು ಹೊಂದಿದ್ದಾರೆ, ಅವರು ಮೂರು ವಿದೇಶಿ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ ಹಾಗೂ ನಾಲ್ಕು ಆಡುಗಳ ಮಾಲೀಕರಾಗಿದ್ದಾರೆ ಎಂದು ಚುನಾವಣಾ ಆಯೋಗ ಮಂಗಳವಾರ ಹೇಳಿದೆ.
ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಪ್ರಮುಖ ರಾಜಕಾರಣಿಗಳ ಆಸ್ತಿ ವಿವರಗಳನ್ನು ಪಾಕಿಸ್ತಾನಿ ಚುನಾವಣಾ ಆಯೋಗ (ಇಸಿಪಿ) ಸಾರ್ವಜನಿಕರಿಗೆ ಬಿಡುಗಡೆಗೊಳಿಸಿದೆ ಎಂದು ‘ಎಕ್ಸ್ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ಪಾಕಿಸ್ತಾನದ ಎಲ್ಲ ರಾಜಕಾರಣಿಗಳ ಪೈಕಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಅಧ್ಯಕ್ಷ ಬಿಲಾವಲ್ ಭುಟ್ಟೊ ಅತ್ಯಂತ ಶ್ರೀಮಂತರಾಗಿದ್ದಾರೆ ಹಾಗೂ ಅವರು 150 ಕೋಟಿ ರೂಪಾಯಿ ವೌಲ್ಯದ ಸಂಪತ್ತು ಹೊಂದಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.
Next Story