ಶಿಶುವನ್ನು ಕೊಂದ ಮಹಿಳೆಗೆ 6 ವರ್ಷ ಜೈಲು
ಲಂಡನ್,ಜು.21: ಮೂರು ವರ್ಷಗಳ ಹಿಂದೆ, ಏಳು ವರ್ಷ ವಯಸ್ಸಿನ ತನ್ನ ಮಗುವನ್ನು ಹತ್ಯೆಗೈದ ಪ್ರಕರಣದಲ್ಲಿ ಭಾರತೀಯ ಮೂಲದ ಯುವತಿಗೆ ಬ್ರಿಟನ್ನ ನ್ಯಾಯಾಲಯವೊಂದು 6 ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ.
33 ವರ್ಷ ವಯಸ್ಸಿನ ಶಾಲಿನಿ ಪದ್ಮನಾಭ್ ಶಿಕ್ಷೆ ವಿಧಿಸಲ್ಪಟ್ಟ ಮಹಿಳೆೆ. ಇದೊಂದು ಕೊಲೆಕೃತ್ಯವಾದರೂ, ಉದ್ದೇಶಪೂರ್ವಕವಲ್ಲದ ನರಹತ್ಯೆಯೆಂದು ನ್ಯಾಯಾಧೀಶರು ತೀರ್ಪಿನಲ್ಲಿ ಅಭಿಪ್ರಾಯಿಸಿದ್ದಾರೆ.
9 ತಿಂಗಳು ತುಂಬದೇ ಜನಿಸಿದ್ದ ಈ ಮಗುವು ಅನಾರೋಗ್ಯದಿಂದ ಬಳಲುತ್ತಿತು, ಮೊದಲ ನಾಲ್ಕು ತಿಂಗಳುಳ ಕಾಲ ಅದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಮನೆಯಲ್ಲಿ ಅದಕ್ಕೆ ನಳಿಕೆಯ ಮೂಲಕವೇ ಆಹಾರವನ್ನು ನೀಡಲಾಗುತ್ತಿತ್ತು. ಮಗುವಿಗೆ ತಾಯಿ ದೈಹಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಸುಳಿವುಗಳು ಲಭಿಸಿದ್ದವು. ಮಗುವಿನ ತಲೆಯಲ್ಲಿ ಆಳವಾದ ಗಾಯವಾಗಿರುವದು ಕಂಡುಬಂದಿತ್ತು. ದೇಹದ ವಿವಿಧೆಡೆ ಗುರುತರವಾದ ಗಾಯಗಳಾಗಿದ್ದ ಈ ಬಗ್ಗೆ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, 2017ರ ಆಗಸ್ಟ್ನಲ್ಲಿ ಅದು ಮೃತಪಟ್ಟಿತ್ತು.
Next Story