ಚಾಡ್: ಮಹಿಳಾ ಆತ್ಮಹತ್ಯಾ ಬಾಂಬರ್ ದಾಳಿಗೆ 6 ಬಲಿ
ಜಮೇನಾ, ಆ.14: ಅಫ್ರಿಕದ ರಾಷ್ಟ್ರವಾದ ಚಾಡ್ನ ಪಶ್ಚಿಮ ಭಾಗದ ನಗರ ಕೈಜಾ-ಕಿಂದ್ರಿಜಾದಲ್ಲಿ ಬುಧವಾರ ಬೆಳಗ್ಗೆ ಮಹಿಳಾ ಆತ್ಮಹತ್ಯಾ ಬಾಂಬರ್ ಒಬ್ಬಾಕೆ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದು, ಓರ್ವ ಸೈನಿಕ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆಂದು ಅವರು ಹೇಳಿದ್ದಾರೆ. ಇದೊಂದು ನೈಜೀರಿಯಾದ ಬೊಕೊ ಹರಾಮ್ ಭಯೋತ್ಪಾದಕ ಗುಂಪಿನ ಕೃತ್ಯವಾಗಿರಬೇಕೆಂದು ಶಂಕಿಸಲಾಗಿದೆ. ಬುಡಕಟ್ಟುಪಂಗಡದ ಮುಖ್ಯಸ್ಥರೊಬ್ಬರ ನಿವಾಸದ ಮುಂದೆ ಸ್ಫೋಟಕಗಳಿಂದ ತುಂಬಿದ್ದ ಬೆಲ್ಟನ್ನು ಸ್ಫೋಟಿಸಿಕೊಂಡಿದ್ದ ಪ್ರಾದೇಶಿಕ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೊಕೊ ಹರಾಮ್ ಉಗ್ರಗಾಮಿ ಗುಂಪು ದಶಕದ ಹಿಂದೆ ಉತ್ತರ ನೈಜೀರಿಯದಲ್ಲಿ ಬಂಡುಕೋರ ಕೃತ್ಯಗಳನ್ನು ಆರಂಭಿಸಿತ್ತು. ಆನಂತರ ಚಾಡ್ ಸೇರಿದಂತೆ ನೈಜೀರಿಯಾದ ನೆರೆಹೊರೆಯ ರಾಷ್ಟ್ರಗಳಲ್ಲಿಯೂ ಬೊಕೊ ಹರಾಮ್ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ.
Next Story