ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದ ವೇಳೆ ಪಾಕ್ ಸಚಿವನಿಗೆ ವಿದ್ಯುತ್ ಆಘಾತ
ವಿಡಿಯೋ ವೈರಲ್
ಇಸ್ಲಾಮಾಬಾದ್, ಆ.30: ರ್ಯಾಲಿಯೊಂದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೇಳಿಕೆ ನೀಡುತ್ತಿದ್ದ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಾಶಿದ್ ಅಹ್ಮದ್ ವಿದ್ಯುತ್ ಆಘಾತಕ್ಕೊಳಗಾದ ಘಟನೆ ನಡೆದಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, “ನಮಗೆ ನಿಮ್ಮ ಉದ್ದೇಶಗಳು ತಿಳಿದಿದೆ ನರೇಂದ್ರ ಮೋದಿ” ಎನ್ನುವಾಗ ಮೈಕ್ ನ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Next Story