ತೈಲ ಉತ್ಪಾದನೆ ಕಡಿತದ ಸೂಚನೆ ನೀಡಿದ ಸೌದಿಯ ನೂತನ ತೈಲ ಸಚಿವ
ಅಬುಧಾಬಿ, ಸೆ. 9: ತೈಲ ಉತ್ಪಾದನೆ ಕಡಿತದಿಂದ ಎಲ್ಲ ತೈಲ ರಫ್ತು ಮಾಡುವ ದೇಶಗಳಿಗೆ ಪ್ರಯೋಜನವಾಗುತ್ತದೆ ಎಂದು ಸೌದಿ ಅರೇಬಿಯದ ನೂತನ ತೈಲ ಸಚಿವ ರಾಜಕುಮಾರ ಅಬ್ದುಲಝೀಝ್ ಬಿನ್ ಸಲ್ಮಾನ್ ಸೋಮವಾರ ಹೇಳಿದ್ದಾರೆ.
ತೈಲದ ಅತಿ ಪೂರೈಕೆ ಮತ್ತು ಇಳಿಯುತ್ತಿರುವ ಬೆಲೆಯನ್ನು ತಡೆಯಲು ತೈಲ ಉತ್ಪಾದನೆಯಲ್ಲಿ ಇನ್ನಷ್ಟು ಕಡಿತ ಮಾಡುವ ಪ್ರಸ್ತಾವಕ್ಕೆ ತನ್ನ ಬೆಂಬಲ ಇದೆ ಎಂಬ ಇಂಗಿತವನ್ನು ಅವರು ಈ ಮೂಲಕ ವ್ಯಕ್ತಪಡಿಸಿದ್ದಾರೆ.
ತಂದೆ ದೊರೆ ಸಲ್ಮಾನ್ರಿಂದ ರವಿವಾರ ಇಂಧನ ಸಚಿವರಾಗಿ ನೇಮಕಗೊಂಡ ಬಳಿಕ, ನೂತನ ಸಚಿವರು ಸೌದಿ ಅರೇಬಿಯದ ಇಂಧನ ನೀತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಯನ್ನು ಘೋಷಿಸಿಲ್ಲ.
‘‘ನಮ್ಮ ತೈಲ ನೀತಿಯು ಪೂರ್ವನಿರ್ಧರಿತವಾಗಿದೆ ಹಾಗೂ ಅದರಲ್ಲಿ ಯಾವುದೇ ಬದಲಾವಣೆಯಿಲ್ಲ’’ ಎಂದು ಸೌದಿ ಅರೇಬಿಯದ ಸುದ್ದಿ ಚಾನೆಲ್ ಆಲ್-ಅರೇಬಿಯಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.
Next Story