ಅಫ್ಘಾನ್ ಆಸ್ಪತ್ರೆ ಸಮೀಪ ಟ್ರಕ್ ಬಾಂಬ್ ಸ್ಫೋಟ: 20 ಸಾವು
ಕಾಬೂಲ್, ಸೆ. 19: ದಕ್ಷಿಣ ಅಫ್ಘಾನಿಸ್ತಾನದ ಆಸ್ಪತ್ರೆಯೊಂದರ ಬಳಿ ಗುರುವಾರ ತಾಲಿಬಾನ್ ಭಯೋತ್ಪಾದಕರ ಟ್ರಕ್ ಬಾಂಬೊಂದು ಸಿಡಿದು ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಹಾಗೂ 95ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆಗೆಯುತ್ತಿದ್ದಂತೆಯೇ ಸಾವು-ನೋವಿನ ಪ್ರಮಾಣ ಇನ್ನೂ ಹೆಚ್ಚಬಹುದು ಎಂದು ಹೇಳಲಾಗಿದೆ.
ಆಸ್ಪತ್ರೆಯ ಹಲವು ಮಂದಿ ಮೃತರಲ್ಲಿ ಸೇರಿದ್ದಾರೆ.
ಆಸ್ಪತ್ರೆಯ ಸಮೀಪವಿರುವ ಸರಕಾರಿ ಗುಪ್ತಚರ ಇಲಾಖೆಯ ಕಟ್ಟಡವನ್ನು ಗುರಿಯಾಗಿಸಿ ಬಾಂಬ್ ಸ್ಫೋಟಿಸಲಾಗಿದೆ ಎಂದು ತಾಲಿಬಾನ್ ಹೇಳಿದೆ.
Next Story