ಜಪಾನ್ ಚಂಡಮಾರುತ: ಮೃತರ ಸಂಖ್ಯೆ 66ಕ್ಕೆ ಏರಿಕೆ
ಟೋಕಿಯೊ, ಅ. 15: ದಶಕಗಳಲ್ಲೇ ಅತಿ ಭೀಕರ ಚಂಡಮಾರುತದಿಂದಾಗಿ ಜಪಾನ್ನಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 66ಕ್ಕೇರಿದೆ. ರಕ್ಷಣಾ ಸಿಬ್ಬಂದಿ ನಾಪತ್ತೆಯಾಗಿರುವವರಿಗಾಗಿ ಮಣ್ಣು ಮತ್ತು ಅವಶೇಷಗಳ ರಾಶಿಯಲ್ಲಿ ಹುಡುಕಾಡುತ್ತಿದ್ದಾರೆ.
ಚಂಡಮಾರುತ ‘ಹಗಿಬಿಸ್’ ಮಧ್ಯ ಮತ್ತು ಪೂರ್ವ ಜಪಾನ್ಗೆ ಅಪ್ಪಳಿಸಿದ ಮೂರು ದಿನಗಳ ಬಳಿಕ 15 ಮಂದಿ ನಾಪತ್ತೆಯಾದವರ ಪಟ್ಟಿಯಲ್ಲಿದ್ದಾರೆ ಎಂದು ಸರಕಾರಿ ಸುದ್ದಿವಾಹಿನಿ ಎನ್ಎಚ್ಕೆ ವರದಿ ಮಾಡಿದೆ. ಬಿರುಗಾಳಿಯಿಂದಾಗಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸುಮಾರು 1,38,000 ಮನೆಗಳಿಗೆ ನೀರು ಪೂರೈಕೆಯಾಗಿಲ್ಲ ಹಾಗೂ 24,000 ಮನೆಗಳಿಗೆ ವಿದ್ಯುತ್ ಪೂರೈಕೆ ಮರುಸ್ಥಾಪನೆಯಾಗಿಲ್ಲ.
ಚಂಡಮಾರುತದ ಪ್ರಕೋಪದ ಹೆಚ್ಚಿನ ಭಾಗವನ್ನು ಫುಕುಶಿಮ ರಾಜ್ಯ ಎದುರಿಸಿದೆ. ಅಲ್ಲಿ ಕನಿಷ್ಠ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
Next Story