ಸಿಂಗಾಪುರಕ್ಕೆ ಹಾರುತ್ತಿದ್ದ ವಿಮಾನ ಮನಿಲಾದಲ್ಲಿ ತುರ್ತು ಭೂಸ್ಪರ್ಶ
ಸಿಯೋಲ್ (ದಕ್ಷಿಣ ಕೊರಿಯ), ನ. 10: ದಕ್ಷಿಣ ಕೊರಿಯದ ಏಶಿಯಾನ ಏರ್ಲೈನ್ಸ್ಗೆ ಸೇರಿದ, ಸಿಂಗಾಪುರಕ್ಕೆ ಹಾರುತ್ತಿದ್ದ ವಿಮಾನವೊಂದು ಶನಿವಾರ ಇಂಜಿನ್ ಸಮಸ್ಯೆಯಿಂದಾಗಿ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ತುರ್ತು ಭೂಸ್ಪರ್ಶ ನಡೆಸಿದೆ.
ಏಶಿಯಾನ ಏರ್ಲೈನ್ಸ್ ಗೆ ಸೇರಿದ ಏರ್ ಬಸ್ 350 ದಕ್ಷಿಣ ಕೊರಿಯದ ಇಂಚಿಯಾನ್ ನಗರದಿಂದ ಹಾರಾಟ ಆರಂಭಿಸಿತು. ಬಳಿಕ ಅದರ ಒಂದು ಇಂಜಿನ್ ಕೆಲಸ ಮಾಡುವುದನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಮನಿಲಾದಲ್ಲಿ ತುರ್ತು ಭೂಸ್ಪರ್ಶ ನಡೆಸಿತು ಎಂದು ವಿಮಾನಯಾನ ಕಂಪೆನಿಯ ವಕ್ತಾರರೊಬ್ಬರು ರವಿವಾರ ತಿಳಿಸಿದರು.
ವಿಮಾನದಲ್ಲಿ ಸುಮಾರು 310 ಪ್ರಯಾಣಿಕರಿದ್ದರು ಎಂದು ಹೇಳಿದ ಅವರು, ಯಾರೂ ಗಾಯಗೊಂಡಿಲ್ಲ ಎಂದರು.
Next Story