ಎಷ್ಟು ತೆರಿಗೆ ಪಾವತಿಸುತ್ತೀರಿ ಟ್ರಂಪ್? ಅದು ನಿಮಗೆ ಬೇಡ!
ನ್ಯೂಯಾರ್ಕ್, ಮೇ 14: ತಾನು ಎಷ್ಟು ತೆರಿಗೆ ಪಾವತಿಸಿದ್ದೇನೆಂದು ತಿಳಿಯುವ ಹಕ್ಕು ಮತದಾರರಿಗಿಲ್ಲ ಎಂದು ತಾನು ನಂಬುವುದಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ಎಬಿಸಿ ಟಿವಿ ಜಾಲದ ‘ಗುಡ್ ಮಾರ್ನಿಂಗ್ ಅಮೆರಿಕ’ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾವ ತೆರಿಗೆ ದರದಂತೆ ನೀವು ತೆರಿಗೆ ಪಾವತಿಸುತ್ತೀರಿ ಎಂದು ಸಂದರ್ಶಕರು ಪಟ್ಟು ಬಿಡದೆ ಕೇಳಿದಾಗ, ‘‘ಅದು ನಿಮಗೆ ಸಂಬಂಧಿಸಿದ್ದಲ್ಲ’’ ಎಂದು ತಿರುಗೇಟು ನೀಡಿದರು.
2012ರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದವರೇ ಆದ ಮಿಟ್ ರಾಮ್ನಿ ಇದೇ ಪ್ರಶ್ನೆಯನ್ನು ಸರಿಯಾಗಿ ನಿಭಾಯಿಸಲು ವಿಫಲವಾಗಿದ್ದರು.
Next Story