ದೊಣಿ ಮುಳುಗಿ 58 ವಲಸಿಗರ ಸಾವು: ವಿಶ್ವಸಂಸ್ಥೆ
ಜಿನೀವ (ಸ್ವಿಟ್ಸರ್ಲ್ಯಾಂಡ್), ಡಿ. 6: ಆಫ್ರಿಕ ಖಂಡದ ವಾಯುವ್ಯ ಭಾಗದಲ್ಲಿರುವ ದೇಶ ಮಾರಿಟೇನಿಯದ ಕರಾವಳಿ ಸಮೀಪದ ಸಮುದ್ರದಲ್ಲಿ ಗುರುವಾರ ದೋಣಿಯೊಂದು ಮುಳುಗಿದ್ದು ಕನಿಷ್ಠ 58 ವಲಸಿಗರು ಮುಳುಗಿ ಮೃತಪಟ್ಟಿದ್ದಾರೆ ಎಂದು ಅಂತರ್ರಾಷ್ಟ್ರೀಯ ವಲಸಿಗರ ಸಂಘಟನೆ ಹೇಳಿದೆ.
83 ಮಂದಿ ಈಜುತ್ತಾ ದಡ ಸೇರಿದರು ಎಂದು ವಿಶ್ವಸಂಸ್ಥೆಯ ಘಟಕ ಸಂಸ್ಥೆ ತಿಳಿಸಿದೆ.
ಆದರೆ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 150 ಮಂದಿ ದೋಣಿಯಲ್ಲಿದ್ದರು ಎಂದು ಬದುಕುಳಿದವರು ಹೇಳಿದ್ದಾರೆ.
ದೋಣಿಯು ನವೆಂಬರ್ 27ರಂದು ಗಾಂಬಿಯ ದೇಶದಿಂದ ಹೊರಟಿತ್ತು.
Next Story