ಫಿನ್ಲ್ಯಾಂಡ್ ನ ಸನ್ನಾ ಮಾರಿನ್ ಜಗತ್ತಿನ ಅತಿ ಕಿರಿಯ ಪ್ರಧಾನಿ
ಫೊಟೋ ಕೃಪೆ: twitter.com/MarinSanna
ಹೆಲ್ಸಿಂಕಿ (ಫಿನ್ಲ್ಯಾಂಡ್), ಡಿ. 9: ಫಿನ್ಲ್ಯಾಂಡ್ ದೇಶದ ಆಡಳಿತಾರೂಢ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ರವಿವಾರ 34 ವರ್ಷದ ಮಾಜಿ ಸಾರಿಗೆ ಸಚಿವೆ ಸನ್ನಾ ಮಾರಿನ್ರನ್ನು ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿದೆ. ಇದರೊಂದಿಗೆ ಅವರು ಜಗತ್ತಿನ ಅತಿ ಕಿರಿಯ ಹಾಲಿ ಪ್ರಧಾನಿಯಾಗಿದ್ದಾರೆ.
ಮಂಗಳವಾರ ರಾಜೀನಾಮೆ ನೀಡಿರುವ ನಿರ್ಗಮನ ಪ್ರಧಾನಿ ಆ್ಯಂಟಿ ರಿನೆ ಸ್ಥಾನಕ್ಕೆ ಹೊಸಬರನ್ನು ಆರಿಸಲು ರವಿವಾರ ನಡೆದ ಚುನಾವಣೆಯಲ್ಲಿ ಸನ್ನಾ ಮಾರಿನ್ ಅಲ್ಪ ಮತಗಳ ಅಂತರದಿಂದ ವಿಜಯಿಯಾದರು.
ಅಂಚೆ ಸಿಬ್ಬಂದಿಯ ಮುಷ್ಕರವನ್ನು ನಿಭಾಯಿಸಿದ ರೀತಿಗಾಗಿ ಆ್ಯಂಟಿ ರಿನೆ ಮಿತ್ರ ಪಕ್ಷ ಸೆಂಟರ್ ಪಾರ್ಟಿಯ ವಿಶ್ವಾಸವನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ.
34 ವರ್ಷದ ಮಾರಿನ್ ಜಗತ್ತಿನ ಅತಿ ಕಿರಿಯ ಸರಕಾರಿ ಮುಖ್ಯಸ್ಥರಾಗಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಯುಕ್ರೇನ್ ಪ್ರಧಾನಿ 35 ವರ್ಷದ ಒಲೆಕ್ಸಿಯ್ ಹೊಂಚರುಕ್ ಇದ್ದಾರೆ.
Next Story