ಜ್ವಾಲಾಮುಖಿ ದ್ವೀಪದಿಂದ 6 ಶವಗಳ ಸಾಗಾಟ
ವೆಲಿಂಗ್ಟನ್, ಡಿ. 13: ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯೊಂದರಲ್ಲಿ, ನ್ಯೂಝಿಲ್ಯಾಂಡ್ನ ಸೇನಾ ತಂಡವೊಂದು ಶುಕ್ರವಾರ ಜ್ವಾಲಾಮುಖಿ ದ್ವೀಪ ವೈಟ್ ಐಲ್ಯಾಂಡ್ನಿಂದ ಆರು ಮೃತದೇಹಗಳನ್ನು ತಂದಿವೆ.
ಹೆಲಿಕಾಪ್ಟರ್ಗಳ ಮೂಲಕ ವೈಟ್ ಐಲ್ಯಾಂಡ್ನಲ್ಲಿ ಇಳಿದ ಸೈನಿಕರು ಎಷ್ಟು ಸಾಧ್ಯವೋ ಅಷ್ಟು ಬೇಗ ಶವಗಳನ್ನು ಸಂಗ್ರಹಿಸುವ ಕಾರ್ಯಾಚರಣೆ ನಡೆಸಿದರು. ಜ್ವಾಲಾಮುಖಿಯು ಮುಂದಿನ ಗಂಟೆಗಳಲ್ಲಿ ಇನ್ನೊಮ್ಮೆ ಸ್ಫೋಟಿಸುವ ಸಾಧ್ಯತೆ 50-60 ಶೇಕಡ ಇದೆ ಎಂಬುದಾಗಿ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಜ್ವಾಲಾಮುಖಿಯು ಸ್ಫೋಟಗೊಂಡಿತ್ತು. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ.
Next Story