ಫಿಲಿಪ್ಪೀನ್ಸ್ನಲ್ಲಿ ಪ್ರಬಲ ಭೂಕಂಪ; ಮಗು ಸಾವು ಹಲವರಿಗೆ ಗಾಯ
ಸಾಂದರ್ಭಿಕ ಚಿತ್ರ
ಮನಿಲಾ (ಫಿಲಿಪ್ಪೀನ್ಸ್), ಡಿ. 15: ದಕ್ಷಿಣ ಫಿಲಿಪ್ಪೀನ್ಸ್ನ ಮಿಂಡನಾವೊ ದ್ವೀಪದಲ್ಲಿ ರವಿವಾರ ಪ್ರಬಲ ಭೂಕಂಪವೊಂದು ಸಂಭವಿಸಿದ್ದು ಒಂದು ಮಗು ಪ್ರಾಣ ಕಳೆದುಕೊಂಡಿದೆ ಹಾಗೂ ಡಝನ್ಗಟ್ಟಳೆ ಜನರು ಗಾಯಗೊಂಡಿದ್ದಾರೆ. ಹಲವಾರು ಕಟ್ಟಡಗಳು ಹಾನಿಗೊಳಗಾಗಿವೆ.
ರಿಕ್ಟರ್ ಮಾಪಕದಲ್ಲಿ 6.8ರಷ್ಟಿದ್ದ ತೀವ್ರತೆಯ ಭೂಕಂಪದ ಕೇಂದ್ರ ಬಿಂದು ಡವಾವೊ ನಗರದ ದಕ್ಷಿಣಕ್ಕೆ 90 ಕಿಲೋಮೀಟರ್ ದೂರದಲ್ಲಿರುವ ಪಡಾಡ ಎಂಬಲ್ಲಿತ್ತು. ಪಡಾಡದಲ್ಲಿ ಭಾರೀ ಹಾನಿಗೆ ಒಳಗಾಗಿರುವ ಮಾರುಕಟ್ಟೆ ಕಟ್ಟಡದಲ್ಲಿ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದೇ ಪ್ರದೇಶದಲ್ಲಿ ಅಕ್ಟೋಬರ್ನಲ್ಲಿ ಭೀಕರ ಸರಣಿ ಭೂಕಂಪಗಳು ನಡೆದಿದ್ದವು. ಆ ಆಘಾತದಿಂದ ಅದು ಹೊರಬರುವಷ್ಟರಲ್ಲಿ ಇನ್ನೊಂದು ಪ್ರಬಲ ಭೂಕಂಪ ಸಂಭವಿಸಿದೆ.
Next Story