ಇನ್ನೊಂದು ಕೊಲ್ಲಿ ಯುದ್ಧವನ್ನು ಜಗತ್ತು ತಾಳಿಕೊಳ್ಳದು: ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ
file photo
ವಿಶ್ವಸಂಸ್ಥೆ, ಜ. 4: ಇನ್ನೊಂದು ಕೊಲ್ಲಿ ಯುದ್ಧವನ್ನು ಜಗತ್ತು ತಾಳಿಕೊಳ್ಳಲಾರದು ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಶುಕ್ರವಾರ ಹೇಳಿದ್ದಾರೆ.
ಬಗ್ದಾದ್ನಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಇರಾನ್ ಸೇನಾಧಿಕಾರಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
‘‘ಕೊಲ್ಲಿಯಲ್ಲಿ ಉದ್ವಿಗ್ನತೆ ಶಮನಕ್ಕಾಗಿ ಮಹಾಕಾರ್ಯದರ್ಶಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ’’ ಎಂದು ಗುಟೆರಸ್ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಇದು ನಾಯಕರು ಗರಿಷ್ಠ ಸಂಯಮವನ್ನು ವಹಿಸಬೇಕಾದ ಕ್ಷಣ. ಕೊಲ್ಲಿಯಲ್ಲಿ ಇನ್ನೊಂದು ಯುದ್ಧವನ್ನು ಜಗತ್ತು ತಾಳಿಕೊಳ್ಳಲಾರದು’’ ಎಂದು ಅವರು ಹೇಳಿದರು.
Next Story