ಅಮೆರಿಕವು ಸೇನೆಯನ್ನು ದುರುಪಯೋಗಪಡಿಸಬಾರದು: ಚೀನಾ ಒತ್ತಾಯ
ಬೀಜಿಂಗ್, ಜ. 5: ಅಮೆರಿಕವು ಸೇನೆಯನ್ನು ದುರುಪಯೋಗಪಡಿಸಬಾರದು ಹಾಗೂ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಚೀನಾ ವಿದೇಶ ಸಚಿವ ವಾಂಗ್ ಯಿ ಶನಿವಾರ ಅಮೆರಿಕಕ್ಕೆ ಕರೆ ನೀಡಿದ್ದಾರೆ.
ಇರಾನ್ ವಿದೇಶ ಸಚಿವ ಜವಾದ್ ಝಾರಿಫ್ ಜೊತೆ ಫೋನ್ನಲ್ಲಿ ಮಾತನಾಡಿದ ವೇಳೆ ಚೀನಾ ವಿದೇಶ ಸಚಿವರು ಈ ಕರೆ ನೀಡಿದ್ದಾರೆ.
‘‘ಅಮೆರಿಕದ ಅಪಾಯಕಾರಿ ಸೇನಾ ಕಾರ್ಯಾಚರಣೆಯು ಅಂತರ್ರಾಷ್ಟ್ರೀಯ ಸಂಬಂಧಗಳ ಮೂಲ ನಿಯಮಾವಳಿಗಳನ್ನೇ ಉಲ್ಲಂಘಿಸಿದೆ ಹಾಗೂ ಅದು ಪ್ರಾದೇಶಿಕ ಉದ್ವಿಗ್ನತೆ ಮತ್ತು ಪ್ರಕ್ಷುಬ್ಧತೆಯನ್ನು ಹೆಚ್ಚಿಸಲಿದೆ’’ ಎಂದು ಜವಾದ್ ಝಾರಿಫ್ ಜೊತೆ ಮಾತುಕತೆ ನಡೆಸಿದ ವೇಳೆ ವಾಂಗ್ ಯಿ ಹೇಳಿದರು ಎಂದು ಚೀನಾ ವಿದೇಶ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.
‘‘ಅಂತರ್ರಾಷ್ಟ್ರೀಯ ಸಂಬಂಧದಲ್ಲಿ ಬಲ ಪ್ರಯೋಗವನ್ನು ಚೀನಾ ವಿರೋಧಿಸುತ್ತದೆ. ಅಲ್ಲಿ ಸೇನೆಗಾಗಲಿ ಅಗಾಧ ಒತ್ತಡಕ್ಕಾಗಲಿ ಅವಕಾಶವಿಲ್ಲ’’ ಎಂದು ವಾಂಗ್ ಹೇಳಿದ್ದಾರೆ.
Next Story