ಸಾಂಸ್ಕೃತಿಕ ಸ್ಥಳಗಳ ಮೇಲಿನ ದಾಳಿ ಯುದ್ಧಾಪರಾಧ: ಇರಾನ್ ಸಚಿವ
ಟೆಹರಾನ್ (ಇರಾನ್), ಜ. 5: ಇರಾನ್ನ ಯಾವುದೇ ಸಾಂಸ್ಕೃತಿಕ ಸ್ಥಳಗಳ ಮೇಲೆ ದಾಳಿ ನಡೆಸುವುದು ಯುದ್ಧಾಪರಾಧವಾಗಿದೆ ಎಂದು ಆ ದೇಶದ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಹೇಳಿದ್ದಾರೆ.
ಇರಾನ್ ಅಮೆರಿಕ ಸಿಬ್ಬಂದಿ ಮತ್ತು ಸೊತ್ತುಗಳ ಮೇಲೆ ದಾಳಿ ನಡೆಸಿದರೆ ಅಮೆರಿಕವು ಹಿಂದೆಂದಿಗಿಂತಲೂ ಭೀಕರವಾಗಿ ಸಾಂಸ್ಕೃತಿಕ ಸ್ಥಳಗಳು ಸೇರಿದಂತೆ ಇರಾನ್ನ 52 ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ ಬಳಿಕ ಅವರು ಹೀಗೆ ಹೇಳಿದ್ದಾರೆ.
Next Story