ಒಟ್ಟಾವ: ಶೂಟೌಟ್ಗೆ ಓರ್ವ ಬಲಿ;ಮೂವರಿಗೆ ಗಾಯ
ಸಾಂದರ್ಭಿಕ ಚಿತ್ರ
ಒಟ್ಟಾವ,ಜ.9: ಕೆನಡ ರಾಜಧಾನಿ ಒಟ್ಟಾವದಲ್ಲಿ ಬುಧವಾರ ಸಂಸತ್ ಭವನದ ಸಮೀಪ ನಡೆದ ಶೂಟೌಟ್ನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.
ಸ್ಥಳೀಯ ಕಾಲಮಾನ 7:30ರ ವೇಳೆಗೆ ಸಂಸತ್ಭವನದಿಂದ ಒಂದು ಕಿ.ಮೀ. ದೂರದಲ್ಲಿ ಗುಂಡೆಸೆತ ನಡೆದಿದ್ದಾಗಿ ಹೇಳಿಕೆಯು ತಿಳಿಸಿದೆ. ಗುಂಡು ಹಾರಾಟ ನಡೆಸಿದ ದುಷ್ಕರ್ಮಿಗಾಗಿ ಪೊಲೀಸರು ಭಾರೀ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೊಂದು ಯೋಜಿತವಾದ ಗುಂಡೆಸೆತದ ಪ್ರಕರಣವೆಂದು ಪೊಲೀಸ್ ಇನ್ಸ್ಪೆಕ್ಟರ್ ಫ್ರಾಂಕೊಯಿಸ್ ಡಾವೊಸ್ಟ್ ತಿಳಿಸಿದ್ದಾರೆ.
Next Story