ಟ್ರಂಪ್ ಓಲೈಕೆಗಾಗಿ ಐರೋಪ್ಯ ದೇಶಗಳಿಂದ ಪರಮಾಣು ಒಪ್ಪಂದ ತ್ಯಾಗ: ಇರಾನ್ ವಿದೇಶ ಸಚಿವ ಆರೋಪ
ಟೆಹರಾನ್, ಜ. 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪ್ರತಿಕೂಲ ವ್ಯಾಪಾರ ಧೋರಣೆಗಳನ್ನು ನಿವಾರಿಸಿಕೊಳ್ಳಲು ಯುರೋಪ್ ದೇಶಗಳು 2015ರ ಪರಮಾಣು ಒಪ್ಪಂದವನ್ನು ಬಲಿಕೊಡುತ್ತಿವೆ ಎಂದು ಇರಾನ್ ಆರೋಪಿಸಿದೆ.
ಪರಮಾಣು ಒಪ್ಪಂದವನ್ನು ಇರಾನ್ ಉಲ್ಲಂಘಿಸುತ್ತಿದೆ ಎಂಬುದಾಗಿ ದೂರು ಕೊಡುವಂತೆ ಅಮೆರಿಕ ಹೇರುತ್ತಿರುವ ಒತ್ತಡಕ್ಕೆ ಮಣಿಯುವ ನಿರ್ಧಾರವನ್ನು ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ತೆಗೆದುಕೊಂಡಿವೆ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಹೇಳಿದರು. ಹಾಗಾಗಿ, ನೈತಿಕವಾಗಿ ತಾವು ಉನ್ನತ ಸ್ಥಾನದಲ್ಲಿದ್ದೇವೆ ಎಂದು ಹೇಳಿಕೊಳ್ಳಲು ಇನ್ನು ಈ ದೇಶಗಳಿಗೆ ಯಾವುದೇ ಹಕ್ಕಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
‘‘ಟ್ರಂಪ್ರ ಹೆಚ್ಚುವರಿ ಆಮದು ತೆರಿಗೆಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ಮೂರು ಸರಕಾರಗಳು ಪರಮಾಣು ಒಪ್ಪಂದದ ಪಳೆಯುಳಿಕೆಗಳನ್ನು ಮಾರಾಟ ಮಾಡಿವೆ’’ ಎಂದು ಝಾರಿಫ್ ಆರೋಪಿಸಿದರು.
Next Story