ಮಾತಿನ ಬಗ್ಗೆ ಎಚ್ಚರಿಕೆಯಿರಲಿ ; ಆಯತುಲ್ಲಾ ಅಲಿ ಖಾಮಿನೈಗೆ ಟ್ರಂಪ್ ಪ್ರತ್ಯುತ್ತರ
ವಾಶಿಂಗ್ಟನ್, ಜ. 18: ‘ನಿಮ್ಮ ಮಾತಿನ ಬಗ್ಗೆ ನೀವು ತುಂಬಾ ಎಚ್ಚರಿಕೆಯಿಂದಿರಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಇರಾನ್ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈಗೆ ಎಚ್ಚರಿಕೆ ನೀಡಿದ್ದಾರೆ.
‘‘ಇತ್ತೀಚಿನ ದಿನಗಳಲ್ಲಿ ‘ಅಷ್ಟೊಂದು ಸರ್ವೋಚ್ಛ’ರೇನೂ ಅಲ್ಲದ, ಇರಾನ್ನ ತಥಾಕಥಿತ ‘ಸರ್ವೋಚ್ಛ ನಾಯಕ’ರು ಅಮೆರಿಕ ಮತ್ತು ಯುರೋಪ್ನ ಬಗ್ಗೆ ಕೆಲವೊಂದು ಕೀಳು ಮಾತುಗಳನ್ನು ಆಡಿದ್ದಾರೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಅಮೆರಿಕವನ್ನು ಕೆಟ್ಟದಾಗಿ ಬಿಂಬಿಸಿ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯನ್ನು ‘ಅಮೆರಿಕದ ಸೇವಕರು’ ಎಂದು ಬಣ್ಣಿಸುವ ಖಾಮಿನೈಯ ಭಾಷಣ ತಪ್ಪು ಎಂದು ಟ್ರಂಪ್ ಹೇಳಿದ್ದಾರೆ.
‘‘ಅವರ ಆರ್ಥಿಕತೆ ಕುಸಿಯುತ್ತಿದೆ. ಅವರ ಜನರು ನರಳುತ್ತಿದ್ದಾರೆ. ಅವರು ತನ್ನ ಮಾತಿನಲ್ಲಿ ಅತ್ಯಂತ ಎಚ್ಚರಿಕೆಯಿಂದಿರಬೇಕು’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
Next Story