ಉಡಾವಣೆಗೆ 2 ಉಪಗ್ರಹಗಳ ಸಿದ್ಧತೆ: ಇರಾನ್
ಟೆಹರಾನ್ (ಇರಾನ್), ಜ. 19: ಹೊಸದಾಗಿ ನಿರ್ಮಿಸಲ್ಪಟ್ಟಿರುವ ಎರಡು ಕೃತಕ ಉಪಗ್ರಹಗಳು ಉಡಾವಣಾ ಪೂರ್ವ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿವೆ ಹಾಗೂ ಅವುಗಳನ್ನು ಉಡಾವಣೆಗಾಗಿ ದೇಶದ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗುವುದು ಎಂದು ಇರಾನ್ ರವಿವಾರ ಹೇಳಿದೆ. ಆದರೆ, ಅದು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಇರಾನ್ ದೂರಸಂಪರ್ಕ ಸಚಿವ ಮುಹಮ್ಮದ್ ಜವಾದ್ ಅಝರಿ ಜಹ್ರೂಮಿ, ‘‘ಇದೊಂದು ಮಹತ್ವದ ಸಂಶೋಧನಾತ್ಮಕ ಬೆಳವಣಿಗೆಯಾಗಿದೆ’’ ಎಂದರು.
ಈ ಉಪಗ್ರಹಗಳನ್ನು ಯಾವಾಗ ಉಡಾಯಿಸಲಾಗುವುದು ಎನ್ನುವುದನ್ನು ಇರಾನ್ ಹೇಳಿಲ್ಲ. ಆದರೆ, ಸಾಮಾನ್ಯವಾಗಿ ರಾಷ್ಟ್ರೀಯ ರಜಾದಿನಗಳಂದು ಅದು ಉಪಗ್ರಹಗಳನ್ನು ಉಡಾಯಿಸುತ್ತದೆ.
ಅದು ಮುಂದಿನ ತಿಂಗಳು ಇಸ್ಲಾಮಿಕ್ ಕ್ರಾಂತಿಯ 41ನೇ ವಾರ್ಷಿಕ ದಿನವನ್ನು ಆಚರಿಸಲಿದೆ.
Next Story