ಹ್ಯೂಸ್ಟನ್: ಕಾರ್ಖಾನೆಯಲ್ಲಿ ಸ್ಫೋಟ
file photo
ಹ್ಯೂಸ್ಟನ್ (ಅಮೆರಿಕ), ಜ. 24: ಅಮೆರಿಕದ ಈಶಾನ್ಯ ಹ್ಯೂಸ್ಟನ್ ರಾಜ್ಯದ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಸ್ಫೋಟದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಫೋಟದ ಬಳಿಕ ಹುಟ್ಟಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಆರಿಸಿದರು.
ಸ್ಥಳೀಯ ಸಮಯ ಮುಂಜಾನೆ 4:15ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಈ ಪ್ರದೇಶದಲ್ಲಿರುವ ಹಲವಾರು ಮನೆಗಳು ಹಾನಿಗೀಡಾಗಿವೆ.
Next Story