ಚೀನಾದಲ್ಲಿ ಕೊರೋನ ವೈರಸ್: ಸಾವಿನ ಸಂಖ್ಯೆ 56ಕ್ಕೆ ಏರಿಕೆ
ಸುಮಾರು 2000 ಮಂದಿಗೆ ಬಾಧಿಸಿದ ಸೋಂಕು
ವುಹಾನ್, ಜ.26: ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನ ವೈರಸ್ಗೆ ಬಲಿಯಾಗಿರುವ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ 2,000ಕ್ಕೂ ಅಧಿಕ ಮಂದಿಗೆ ವೈರಸ್ ಬಾಧಿಸಿದೆ ಎಂದು ಚೀನಾದ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಕೊರೋನ ವೈರಸ್ಗೆ ಸಂಬಂಧಿಸಿ ಕನಿಷ್ಠ 688 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಹುಬೆ ಪ್ರಾಂತ್ಯದಲ್ಲಿ 13 ಮಂದಿ ಮೃತಪಟ್ಟಿದ್ದು, ಶಾಂೈನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
Next Story