ಜಪಾನ್: ಮೂವರಲ್ಲಿ ಸೋಂಕು ಪತ್ತೆ
ಟೋಕಿಯೊ (ಜಪಾನ್), ಜ. 30: ಕೊರೋನವೈರಸ್ ಸೋಂಕಿನ ಕೇಂದ್ರಬಿಂದು ಚೀನಾದ ವುಹಾನ್ ನಗರದಿಂದ ತೆರವುಗೊಳಿಸಲ್ಪಟ್ಟಿರುವ ಜಪಾನೀಯರ ಪೈಕಿ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಪಾನ್ ಸರಕಾರ ಗುರುವಾರ ತಿಳಿಸಿದೆ.
ವುಹಾನ್ನಿಂದ ಜಪಾನೀಯರನ್ನು ಹೊತ್ತ ಎರಡನೇ ವಿಮಾನವು ಟೋಕಿಯೊದಲ್ಲಿ ಇಳಿಯುತ್ತಿದ್ದಂತೆಯೇ ಈ ಘೋಷಣೆಯನ್ನು ಮಾಡಲಾಗಿದೆ.
ಇಲ್ಲಿಯವರೆಗೆ ವುಹಾನ್ನಿಂದ 400ಕ್ಕೂ ಅಧಿಕ ಜಪಾನೀಯರನ್ನು ತೆರವುಗೊಳಿಸಲಾಗಿದೆ.
Next Story