ಮಾಜಿ ನ್ಯೂಝಿಲ್ಯಾಂಡ್ ಪ್ರಧಾನಿ, ಡಬ್ಲ್ಯುಟಿಒ ಮುಖ್ಯಸ್ಥ ಮೈಕ್ ಮೂರ್ ನಿಧನ
ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಫೆ. 2: ಕ್ಯಾನ್ಸರನ್ನು ಜಯಿಸಿ, ಔಪಚಾರಿಕ ಶಿಕ್ಷಣದ ಕೊರತೆಯನ್ನು ಮೀರಿ ನ್ಯೂಝಿಲ್ಯಾಂಡ್ನ ಪ್ರಧಾನಿ ಹಾಗೂ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ ಮುಖ್ಯಸ್ಥ ಹುದ್ದೆಗೆ ಏರಿದ ಮೈಕ್ ಮೂರ್ ರವಿವಾರ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೂರ್ 1999ರಿಂದ 2002ರವರೆಗೆ ಡಬ್ಲುಟಿಒದ ಮಹಾನಿರ್ದೇಶಕರಾಗಿದ್ದರು ಹಾಗೂ ಅವರ ಅವಧಿಯಲ್ಲಿ ಚೀನಾವು ಡಬ್ಲುಟಿಒಗೆ ಸೇರ್ಪಡೆಗೊಂಡಿತು. ಅವರು 2010ರಿಂದ 2015ರವರೆಗೆ ಅಮೆರಿಕಕ್ಕೆ ನ್ಯೂಝಿಲ್ಯಾಂಡ್ನ ರಾಯಭಾರಿಯಾಗಿದ್ದರು.
ಅವರು 59 ದಿನಗಳ ಕಾಲ ನ್ಯೂಝಿಲ್ಯಾಂಡ್ ಪ್ರಧಾನಿಯಾಗಿದ್ದರು. ಅವರು ಆಕ್ಲ್ಯಾಂಡ್ನಲ್ಲಿರುವ ತನ್ನ ನಿವಾಸದಲ್ಲಿ ನಿಧನರಾದರು ಎಂದು ಅವರ ಪತ್ನಿ ಯವೋನ್ ಮೂರ್ ತಿಳಿಸಿದರು.
Next Story