ಪಾಕ್ಗೆ ಪ್ರಯಾಣಿಸದಂತೆ ಅಮೆರಿಕ ಪ್ರಜೆಗಳಿಗೆ ಎಚ್ಚರಿಕೆ
ವಾಶಿಂಗ್ಟನ್, ಫೆ. 4: ಭಯೋತ್ಪಾದನೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ಮರುಪರಿಶೀಲಿಸುವಂತೆ ಅಮೆರಿಕವು ತನ್ನ ನಾಗರಿಕರಿಗೆ ಸೋಮವಾರ ಸಲಹೆ ನೀಡಿದೆ ಹಾಗೂ ಬಲೂಚಿಸ್ತಾನ ಮತ್ತು ಖೈಬರ್ ಪಖ್ತೂನ್ಖ್ವ ರಾಜ್ಯಗಳಿಗಾಗಿ ಗರಿಷ್ಠ ಮಟ್ಟದ ಎಚ್ಚರಿಕೆಯನ್ನು ಹೊರಡಿಸಿದೆ.
ಪಾಕಿಸ್ತಾನದ ಈ ಎರಡು ರಾಜ್ಯಗಳು ಗಡಿ ನಿಯಂತ್ರಣ ರೇಖೆಯಲ್ಲಿದ್ದು, ಅಲ್ಲಿ ‘ಭಯೋತ್ಪಾದಕ ಗುಂಪುಗಳು ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಜನವರಿ 31ರಂದು ಬಿಡುಗಡೆ ಮಾಡಿದ ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನದಲ್ಲಿ ನೆಲೆಸಿರುವ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಆ ದೇಶದ ನಾಗರಿಕರಿಗೆ ತುರ್ತು ಸೇವೆಗಳನ್ನು ನೀಡುವಲ್ಲಿ ಆ ದೇಶದ ಸರಕಾರ ವಿಫಲವಾಗಿದೆ ಎಂದು ಎಚ್ಚರಿಕೆ ತಿಳಿಸಿದೆ.
Next Story