ಬೆಂಬಲ ನೀಡಿ ಪ್ರಧಾನಿ ಮೋದಿ ಬರೆದ ಪತ್ರಕ್ಕೆ ಚೀನಾ ‘ಕೃತಜ್ಞ’
ಬೀಜಿಂಗ್, ಫೆ. 10: ಕೊರೋನವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಬಲ ಮತ್ತು ಸಹಾಯದ ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ ಬರೆದಿರುವ ಪತ್ರಕ್ಕೆ ಚೀನಾ ಸೋಮವಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಇದು ಬೀಜಿಂಗ್ ಜೊತೆಗೆ ಹೊಸದಿಲ್ಲಿ ಹೊಂದಿರುವ ಸ್ನೇಹವನ್ನು ‘ಸಂಪೂರ್ಣವಾಗಿ ಪ್ರದರ್ಶಿಸಿದೆ’ ಎಂದು ಅದು ಹೇಳಿದೆ.
‘‘ನೂತನ ಕೊರೋನವೈರಸ್ ನ್ಯುಮೋನಿಯ ವಿರುದ್ಧದ ಚೀನಾದ ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Next Story