ಕೊರೋನವೈರಸ್ ಗೆ ನೂತನ ಹೆಸರು
ಜಿನೀವ, ಫೆ. 12: ಚೀನಾದಲ್ಲಿ ಕಳೆದ ವರ್ಷದ ಡಿಸೆಂಬರ್ನಲ್ಲಿ ಕಾಣಿಸಿಕೊಂಡಿರುವ ನೂತನ ಕೊರೋನವೈರಸ್ಗೆ ವಿಶ್ವ ಆರೋಗ್ಯ ಸಂಸ್ಥೆಯು ‘ಕೋವಿಡ್-19’ ========== ಎಂಬ ಹೆಸರಿಟ್ಟಿದೆ ಎಂದು ಅದರ ಮುಖ್ಯಸ್ಥ ಟೆಡ್ರೊಸ್ ಅದನಮ್ ಗೆಬ್ರಿಯೇಸಸ್ ಮಂಗಳವಾರ ಜಿನೀವದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
======== SARS-CoV-2-------- ಈ ವೈರಸನ್ನು ಅಂತರ್ರಾಷ್ಟ್ರೀಯ ವೈರಸ್ ವರ್ಗೀಕರಣ ಸಮಿತಿಯು ಎಂಬುದಾಗಿ ಮೊದಲು ವಿಂಗಡಿಸಿತ್ತು. ಆದರೆ. ಯಾವುದೇ ಗುಂಪು ಅಥವಾ ದೇಶವನ್ನು ಕಳಂಕದಿಂದ ಪಾರುಮಾಡಲು ಹಾಗೂ ಗೊಂದಲ ತಡೆಯಲು ಅದಕ್ಕೊಂದು ಅಧಿಕೃತ ಹೆಸರು ನೀಡಬೇಕೆಂದು ಸಂಶೋಧಕರು ಒತ್ತಾಯಿಸುತ್ತಾ ಬಂದಿದ್ದರು.
Next Story