ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಲು ವಿವಾಹವನ್ನು ಮುಂದೂಡಿದ್ದ ವೈದ್ಯ ಕೊರೊನಾವೈರಸ್ ಗೆ ಬಲಿ
ಬೀಜಿಂಗ್: ಮಾರಕ ಕೊರೊನಾ ವೈರಸ್ ಸೋಂಕಿಗೊಳಗಾದ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ತನ್ನ ವಿವಾಹವನ್ನು ಮುಂದೂಡಿದ್ದ ಚೀನಾದ ವುಹಾನ್ ಪ್ರಾಂತ್ಯದ 29 ವರ್ಷದ ವೈದ್ಯರೊಬ್ಬರು ಅದೇ ಸೋಂಕಿಗೆ ಬಲಿಯಾಗಿದ್ದಾರೆ.
ಈಗಾಗಲೇ 2,000ಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಹರಡುವಿಕೆ ತಡೆಯಲು ಅವಿರತ ಶ್ರಮ ಪಡುತ್ತಿರುವ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಸಾವಿಗೀಡಾದ ಒಂಬತ್ತನೇ ಪ್ರಕರಣ ಇದಾಗಿದೆ.
ವುಹಾನ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಪೆಂಗ್ ಯಿನ್ಹುವಾ ಗುರುವಾರ ರಾತ್ರಿ ಮೃತಪಟ್ಟಿದ್ದಾರೆಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ. ಶ್ವಾಸ ಸಂಬಂಧಿ ಸೋಂಕುಗಳ ತಜ್ಞ ವೈದ್ಯರಾಗಿದ್ದ ಪೆಂಗ್ ಅವರಿಗೆ ವುಹಾನ್ ನ ಜಿಯಾಂಗ್ ಕ್ಸಿಯಾ ಜಿಲ್ಲೆಯ ಫಸ್ಟ್ ಪೀಪಲ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಸೋಂಕು ತಗಲಿರಬೇಕೆಂದು ಶಂಕಿಸಲಾಗಿದೆ. ಜನವರಿ 25ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಜನವರಿ 30ರಂದು ಅವರನ್ನು ವುಹಾನ್ ಜಿನ್ಯಿಂಟನ್ ಆಸ್ಪತ್ರೆಗೆ ಸೇರಿಸಲಾಗಿತ್ತು.
Next Story