ಕೊರೋನ ವೈರಸ್: ಚೀನಾದಲ್ಲಿ ಸಾವಿನ ಸಂಖ್ಯೆ 2,345ಕ್ಕೆ ಏರಿಕೆ
ಬೀಜಿಂಗ್, ಫೆ. 22: ಚೀನಾದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್ನಿಂದಾಗಿ 109 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 2,345ಕ್ಕೆ ಏರಿದೆ.
ದೇಶಾದ್ಯಂತ ಹೊಸದಾಗಿ 397 ಪ್ರಕರಣಗಳು ವರದಿಯಾಗಿವೆ. ಇದು ಶುಕ್ರವಾರ ದೃಢಪಟ್ಟ ಸುಮಾರು 900 ಪ್ರಕರಣಗಳಿಗಿಂತ ತುಂಬಾ ಕಡಿಮೆಯಾಗಿದೆ. ಇದರೊಂದಿಗೆ ಚೀನಾದಲ್ಲಿ ಈವರೆಗೆ ವರದಿಯಾದ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 76,000ವನ್ನು ದಾಟಿದೆ.
Next Story