ಜಗತ್ತಿನ ಅತಿ ಹಿರಿಯ ಪುರುಷ ನಿಧನ
ಟೋಕಿಯೊ (ಜಪಾನ್), ಫೆ. 25: ಜಗತ್ತಿನ ಬದುಕಿರುವ ಅತಿ ಹಿರಿಯ ಪುರುಷ ಎಂಬುದಾಗಿ ಇತ್ತೀಚೆಗೆ ದಾಖಲೆಗೆ ಸೇರಿದ್ದ ಜಪಾನ್ ವ್ಯಕ್ತಿಯೊಬ್ಬರು ತನ್ನ 112ನೆ ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಜಪಾನ್ನ ಸ್ಥಳೀಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಚಿಟೆಟ್ಸು ವಟನಬೆ ಅವರು ನಿಯಿಗಟದಲ್ಲಿರುವ ನರ್ಸಿಂಗ್ ಹೋಮ್ನಲ್ಲಿ ರವಿವಾರ ನಿಧನರಾದರು ಎಂದು ಅಧಿಕಾರಿ ನುಡಿದರು. ವಟನಬೆ, ನಿಯಿಗಟದಲ್ಲಿ 1907 ಮಾರ್ಚ್ 5ರಂದು ಜನಿಸಿದ್ದರು.
ಎರಡು ವಾರಗಳಿಗೂ ಕಡಿಮೆ ಅವಧಿಯ ಹಿಂದೆ ಜಗತ್ತಿನ ಅತಿ ಹಿರಿಯ ವ್ಯಕ್ತಿಯಾಗಿ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ಅವರು ದಾಖಲಾಗಿದ್ದರು.
ಕೋಪಗೊಳ್ಳದೆ ಇರುವುದು ಮತ್ತು ಮುಖದಲ್ಲಿ ಯಾವಾಗಲೂ ಮುಗುಳುನಗೆಯನ್ನು ಹೊಂದಿರುವುದು ತನ್ನ ದೀರ್ಘಾಯುಷ್ಯದ ರಹಸ್ಯ ಎಂದು ಇತ್ತೀಚೆಗೆ ವಟನಬೆ ಹೇಳಿದ್ದರು.
Next Story