ಇರಾನ್: ಕೊರೋನವೈರಸ್ನಿಂದಾಗಿ ಹೊಸದಾಗಿ 7 ಸಾವು
ಟೆಹರಾನ್, ಫೆ. 27: ಇರಾನ್ನಲ್ಲಿ ಕೊರೋನವೈರಸ್ ಸೋಂಕಿನಿಂದಾಗಿ ಹೊಸದಾಗಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಆ ದೇಶ ಗುರುವಾರ ಘೋಷಿಸಿದೆ. ಇದರೊಂದಿಗೆ ಈ ದೇಶದಲ್ಲಿ ಈ ಮಾರಕ ರೋಗಕ್ಕೆ ಬಲಿಯಾದವರ ಸಂಖ್ಯೆ 26ಕ್ಕೇರಿದೆ.
ಚೀನಾದ ಹೊರಗಿನ ದೇಶವೊಂದರಲ್ಲಿ ಕೊರೋನವೈರಸ್ನಿಂದಾಗಿ ಸಂಭವಿಸಿದ ಅತಿ ಹೆಚ್ಚು ಸಂಖ್ಯೆಯ ಸಾವು ಇದಾಗಿದೆ. ಇರಾನ್ನಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ ಈಗ 245ಕ್ಕೆ ಏರಿದೆ.
‘‘ಕಳೆದ 24 ಗಂಟೆಗಳ ಅವಧಿಯಲ್ಲಿ, 106 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆ 26ಕ್ಕೇರಿದೆ’’ ಎಂದು ಇರಾನ್ ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನುಶ್ ಜಹಾನ್ಪುರ್ ಸರಕಾರಿ ಟಿವಿಗೆ ತಿಳಿಸಿದ್ದಾರೆ.
Next Story