ಚೀನಾ: ಕೊರೋನವೈರಸ್ ಸಾವಿನ ಸಂಖ್ಯೆ 3,012ಕ್ಕೇರಿಕೆ
ಬೀಜಿಂಗ್, ಮಾ. 5: ಮಾರಕ ಕೊರೋನವೈರಸ್ ಕಾಯಿಲೆಯಿಂದಾಗಿ ಹೊಸದಾಗಿ 31 ಸಾವುಗಳು ಸಂಭವಿಸಿವೆ ಎಂದು ಚೀನಾ ಗುರುವಾರ ತಿಳಿಸಿದೆ. ಇದರೊಂದಿಗೆ ಆ ದೇಶದಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆ 3,012ನ್ನು ತಲುಪಿದೆ.
ಈ ಪೈಕಿ 2,305 ಸಾವುಗಳು ಹುಬೈ ಪ್ರಾಂತದ ವುಹಾನ್ ನಗರವೊಂದರಲ್ಲೇ ಸಂಭವಿಸಿದೆ.
ದೇಶದಲ್ಲಿ ನೂತನ ಸೋಂಕು ಪ್ರಕರಣಗಳ ಸಂಖ್ಯೆಯು ಸ್ಥಿರವಾಗಿ ಇಳಿಯುತ್ತಿದೆ ಎಂದು ನ್ಯಾಶನಲ್ ಹೆಲ್ತ್ ಕಮಿಶನ್ ಹೇಳಿದೆ. ಗುರುವಾರ 139 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ ಇದರೊಂದಿಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 80,409ಕ್ಕೆ ಏರಿದೆ ಎಂದು ಅದು ತಿಳಿಸಿದೆ.
Next Story