ಕೊರೋನವೈರಸ್ ಸಾವು: ಚೀನಾವನ್ನು ಹಿಂದಿಕ್ಕಿದ ಇಟಲಿ
ರೋಮ್ (ಇಟಲಿ), ಮಾ. 20: ಮಾರಕ ಸಾಂಕ್ರಾಮಿಕ ಕೊರೋನವೈರಸ್ ಜಗತ್ತಿನ ಮೂಲೆ ಮೂಲೆಗೆ ತಲುಪುತ್ತಿರುವಂತೆಯೇ, ರೋಗದಿಂದಾಗಿ ಚೀನಾದಲ್ಲಿ ಪ್ರಾಣ ಕಳೆದುಕೊಂಡವರಿಗಿಂತ ಹೆಚ್ಚು ಮಂದಿ ಈಗ ಇಟಲಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಸೋಂಕಿನಿಂದಾಗಿ ಒಂದು ದಿನದಲ್ಲಿ 427 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಟಲಿ ಗುರುವಾರ ವರದಿ ಮಾಡಿದೆ. ಇದರೊಂದಿಗೆ ದೇಶದಲ್ಲಿ ಕೊರೋನವೈರಸ್ನಿಂದಾಗಿ ಮೃತಪಟ್ಟವರ ಒಟ್ಟು ಸಂಖ್ಯೆ 3,405ಕ್ಕೆ ಏರಿದೆ ಎಂದು ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚೀನಾದಲ್ಲಿ ಈ ರೋಗದಿಂದಾಗಿ ಮೃತಪಟ್ಟವರ ಅಧಿಕೃತ ಸಂಖ್ಯೆ 3,245.
Next Story