ಇರಾನ್: 127 ಹೊಸ ಸಾವು
1,400ಕ್ಕೂ ಅಧಿಕ ಸೋಂಕು ಪ್ರಕರಣ
ಟೆಹರಾನ್ (ಇರಾನ್), ಮಾ. 23: ಇರಾನ್ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್ನಿಂದಾಗಿ 127 ಸಾವುಗಳು ಸಂಭವಿಸಿವೆ. ಇದರೊಂದಿಗೆ ದೇಶದ ಒಟ್ಟು ಕೊರೋನವೈರಸ್ ಸಾವಿನ ಸಂಖ್ಯೆ 1,812ಕ್ಕೆ ಏರಿದೆ.
ಇದೇ ಅವಧಿಯಲ್ಲಿ ದೇಶದಲ್ಲಿ 1,400ಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ ಹಾಗೂ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 23,049ಕ್ಕೆ ಏರಿದೆ.
Next Story