ಉಗ್ರರ ದಾಳಿಗೆ 20 ಬಲಿ
ವಾಗಡುಗು (ಬುರ್ಕಿನಾ ಫಾಸೊ): ಪಶ್ಚಿಮ ಆಫ್ರಿಕಾದ ದೇಶವಾದ ಬುರ್ಕಿನಾ ಫಾಸೊದ ರಾಜಧಾನಿ ವಾಗಡುಗುವಿನ ಹೊಟೇಲೊಂದರ ಮೇಲೆ ಉಗ್ರರು ನಡೆಸಿದ ದಾಳಿಯಿಂದ 20 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಘಟನೆ ನಡೆದಿದ್ದು, ಹಲವರನ್ನು ಉಗ್ರರು ವಶದಲ್ಲಿರಿಸಿಕೊಂಡಿದ್ದಾರೆ.
ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಪ್ಲೆಂಡಿಂಡ್ ಹೊಟೇಲ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವಿನ ಕಾಳಗ ಮುಂದುವರಿದಿದೆ. ಈ ಮಧ್ಯೆ ಉಗ್ರರ ವಶದಲ್ಲಿದ್ದ ಸಚಿವರೊಬ್ಬರ ಸಹಿತ 30 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.
ಮುಸುಕುದಾರಿಗಳ ತಂಡ ಮಾರಕಾಯುಧಗಳೊಂದಿಗೆ ದಾಳಿ ನಡೆಸಿದ್ದು, ಮೊದಲು ಹೊಟೇಲ್ನ ಮುಂಭಾಗ ಬಾಂಬ್ ಸ್ಫೋಟ ಮಾಡಿ ಭೀತಿ ಸೃಷ್ಟಿಸಲಾಗಿತ್ತು. ಅನಂತರ ನಾಗರಿಕರ ಮೇಲೆ ದಾಳಿ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ ತಿಳಿದುಬಂದಿದೆ.
Next Story