ಕೊರೋನ ಸೋಂಕಿದ್ದರೂ ತಿರುಗಾಡುತ್ತಿದ್ದ ಇಬ್ಬರ ವಿರುದ್ಧ ಕೊಲೆಯತ್ನ ಪ್ರಕರಣ
ಸಾಂದರ್ಭಿಕ ಚಿತ್ರ
ಜೊಹಾನ್ಸ್ಬರ್ಗ್ (ದಕ್ಷಿಣ ಆಫ್ರಿಕ), ಮಾ. 26: ಕೊರೋನವೈರಸ್ ಸೋಂಕು ಪತ್ತೆಯಾದ ಬಳಿಕವೂ ಹೊರಗಡೆ ತಿರುಗಾಡಿಕೊಂಡಿದ್ದ ಇಬ್ಬರ ವಿರುದ್ಧ ದಕ್ಷಿಣ ಆಫ್ರಿಕ ಪೊಲೀಸರು ಕೊಲೆಯತ್ನ ಆರೋಪ ಹೊರಿಸಿದ್ದಾರೆ.
‘‘ಹೊರಗೆ ಹೋಗಬಾರದೆಂದು ಹೇಳಿದ ಬಳಿಕವೂ ಇಬ್ಬರು ವ್ಯಕ್ತಿಗಳು ಹೊರಗೆ ತಿರುಗಾಡುತ್ತಿದ್ದರು. ಅವರ ವಿರುದ್ಧ ಇತರರ ಪ್ರಾಣಗಳನ್ನು ಅಪಾಯಕ್ಕೆ ಗುರಿಪಡಿಸಿರುವುದಕ್ಕಾಗಿ ಕೊಲೆಯತ್ನ ಮೊಕದ್ದಮೆ ದಾಖಲಿಸಲಾಗಿದೆ’’ ಎಂದು ದಕ್ಷಿಣ ಆಫ್ರಿಕದ ಪೊಲೀಸ್ ಸಚಿವ ಭೆಕಿ ಸೆಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Next Story