ಕೊರೋನವೈರಸ್ ಸಾವಿನ ಸಂಖ್ಯೆ: ಚೀನಾವನ್ನು ಹಿಂದಿಕ್ಕಿದ ಸ್ಪೇನ್
ಮ್ಯಾಡ್ರಿಡ್ (ಸ್ಪೇನ್), ಮಾ. 26: ಕೊರೋನವೈರಸ್ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ಬುಧವಾರ ಚೀನಾವನ್ನು ಹಿಂದಿಕ್ಕಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 738 ಜನರು ಮೃತಪಟ್ಟ ಬಳಿಕ ದೇಶದ ಒಟ್ಟು ಕೊರೋನವೈರಸ್ ಸಾವಿನ ಸಂಖ್ಯೆ 3,436ಕ್ಕೆ ಏರಿದೆ.
ಈಗ ಸಾವಿನ ಸಂಖ್ಯೆಯಲ್ಲಿ ಇಟಲಿ ಮಾತ್ರ ಸ್ಪೇನ್ಗಿಂತ ಮುಂದಿದೆ.
ಸ್ಪೇನ್ನಲ್ಲಿ ಹೇರಲಾಗಿರುವ ಅಭೂತಪೂರ್ವ ಬೀಗಮುದ್ರೆ 11ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, ಅಲ್ಲಿ ಮಾರಕ ರೋಗದ ಸೊಂಕಿಗೆ ಒಳಗಾಗಿರುವವರ ಸಂಖ್ಯೆ 47,610ಕ್ಕೆ ಏರಿದೆ.
Next Story