ಇಟಲಿ: ಒಂದು ದಿನದಲ್ಲಿ 889 ಸಾವು
10,000 ದಾಟಿದ ಕೊರೋನ ಸೋಂಕಿತರ ಸಾವು
ಮಿಲಾನ್ (ಇಟಲಿ), ಮಾ. 29: ಇಟಲಿಯ ಕೊರೋನವೈರಸ್ ಸಾವಿನ ಸಂಖ್ಯೆ ಶನಿವಾರ 10,000ವನ್ನು ದಾಟಿದೆ. ಅದೇ ವೇಳೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಅಲ್ಲಿ 889 ಸಾವುಗಳು ವರದಿಯಾಗಿವೆ ಎಂದು ದೇಶದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರದ ದಾಖಲೆಗೆ ಹೋಲಿಸಿದರೆ, ಸತ್ತವರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ.
ಒಂದು ದಿನದಲ್ಲಿ 5,974 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ದೇಶದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 92,472ಕ್ಕೆ ಏರಿದೆ.
ಸರಕಾರವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಎಪ್ರಿಲ್ ಮಧ್ಯ ಭಾಗದವರೆಗೆ ಮುಂದುವರಿಸಿದೆ.
Next Story