ಫಿಲಿಪ್ಪೀನ್ಸ್: ವಿಮಾನ ಸ್ಫೋಟ; ಎಲ್ಲ 8 ಮಂದಿ ಸಾವು
ಮನಿಲಾ (ಫಿಲಿಪ್ಪೀನ್ಸ್), ಮಾ. 30: ರೋಗಿಯೊಬ್ಬರನ್ನು ಜಪಾನ್ಗೆ ಒಯ್ಯುತ್ತಿದ್ದ ವಿಮಾನವೊಂದು ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ರವಿವಾರ ಹಾರಾಟ ಆರಂಭಿಸುವ ವೇಳೆ ಸ್ಫೋಟಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲ 8 ಮಂದಿ ಮೃತಪಟ್ಟಿದ್ದಾರೆ.
ವಿಶೇಷ ವಿಮಾನದಲ್ಲಿ ಮೂವರು ವೈದ್ಯಕೀಯ ಸಿಬ್ಬಂದಿ, ಮೂವರು ವಿಮಾನ ಸಿಬ್ಬಂದಿ, ರೋಗಿ ಮತ್ತು ರೋಗಿಯ ಸಹಾಯಕರೊಬ್ಬರು ಪ್ರಯಾಣಿಸುತ್ತಿದ್ದರು. ಮೃತರಲ್ಲಿ ತಲಾ ಒಬ್ಬ ಅಮೆರಿಕ ಮತ್ತು ಕೆನಡ ರಾಷ್ಟ್ರೀಯರಿದ್ದಾರೆ.
Next Story