ಅಮೆರಿಕ: ಪ್ರಯಾಣ ನಿರ್ಬಂಧ ಒಂದು ತಿಂಗಳು ಮುಂದುವರಿಕೆ
ಕೊರೋನವೈರಸ್ ಸಾವಿನ ಸಂಖ್ಯೆ 2,409ಕ್ಕೆ
ವಾಶಿಂಗ್ಟನ್, ಮಾ. 30: ಅಮೆರಿಕದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ವಿಧಿಸಲಾಗಿರುವ ನಿರ್ಬಂಧಗಳು ಎಪ್ರಿಲ್ 30ರವರೆಗೆ ಮುಂದುವರಿಯಲಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಘೋಷಿಸಿದ್ದಾರೆ.
ಈ ನಡುವೆ, ದೇಶದಲ್ಲಿ ಕೊರೋನವೈರಸ್ ಸೋಂಕಿತರ ಸಂಖ್ಯೆ 1,37,000ಕ್ಕೆ ತಲುಪಿದೆ. ರವಿವಾರ ಆ ದೇಶದಲ್ಲಿ ಹೊಸದಾಗಿ 35,000 ಜನರು ಸೋಂಕಿಗೆ ಗುರಿಯಾಗಿದ್ದಾರೆ. ಇದೇ ಅವಧಿಯಲ್ಲಿ ಅಲ್ಲಿ 300 ಹೊಸ ಸಾವುಗಳು ಸಂಭವಿಸಿದ್ದು, ಸಾವುಗಳ ಒಟ್ಟು ಸಂಖ್ಯೆ 2,409ಕ್ಕೆ ಏರಿದೆ.
Next Story