ಫ್ರಾನ್ಸ್: 418 ಸಾವು: ಇದು ದೇಶದ ಒಂದು ದಿನದ ಸಾವಿನ ದಾಖಲೆ
ಪ್ಯಾರಿಸ್, ಮಾ. 31: ಫ್ರಾನ್ಸ್ನಲ್ಲಿ ನೋವೆಲ್-ಕೊರೋನವೈರಸ್ ಸಾಂಕ್ರಾಮಿಕ ಕಾಯಿಲೆಗೆ ಸೋಮವಾರ 418 ಮಂದಿ ಬಲಿಯಾಗಿದ್ದಾರೆ. ಇದು ದೇಶದಲ್ಲಿ ಮಾರಕ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡ ಬಳಿಕ ವರದಿಯಾದ ಒಂದು ದಿನದ ಗರಿಷ್ಠ ಸಾವಿನ ಸಂಖ್ಯೆಯಾಗಿದೆ.
ಇದರೊಂದಿಗೆ ಫ್ರಾನ್ಸ್ನಲ್ಲಿ ಕೊರೋನವೈರಸ್ನಿಂದಾಗಿ ಮೃತಪಟ್ಟವರ ಒಟ್ಟು ಸಂಖ್ಯೆ 3,024ಕ್ಕೆ ಏರಿದೆ.
ದೇಶದಲ್ಲಿ ಈಗ ಕೊರೋನವೈರಸ್ ಸೋಂಕಿಗೊಳಗಾಗಿ 20,946 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ 5,056 ಮಂದಿ ತೀವ್ರ ನಿಗಾ ಘಟಕಗಳಲ್ಲಿದ್ದಾರೆ ಎಂದು ಸರಕಾರ ದೈನಂದಿನ ವಿವರಣೆಯಲ್ಲಿ ತಿಳಿಸಿದೆ.
Next Story